“7 ಹಂತಗಳಲ್ಲಿ ಗ್ರಾಮದಿಂದ ಜಾಗತಿಕ Health Care & Bio Tech ಉದ್ಯಮಿಯಾಗಿ – ಶ್ರೀವತ್ಸ ನಾಡಿಗ್ ಪಯಣ”
“ಗ್ರಾಮದಿಂದ ಜಾಗತಿಕ Health Care & Bio Tech ಸಾಮ್ರಾಜ್ಯವರೆಗೆ – ಶ್ರೀವತ್ಸ ನಾಡಿಗ್ ಅವರ ಪ್ರೇರಣಾದಾಯಕ ಯಶಸ್ಸಿನ ಪಯಣ”
ಸಾಧಾರಣ ಕನ್ನಡ ಮಾಧ್ಯಮ ವಿದ್ಯಾರ್ಥಿಯಿಂದ ಜಾಗತಿಕ ಮಟ್ಟದ ಆರೋಗ್ಯ ಕ್ಷೇತ್ರದ Health Care & Bio Tech ಉದ್ಯಮಿಯಾಗುವವರೆಗೆ—ಇದು ಶ್ರೀವತ್ಸ ನಾಡಿಗ್ ಅವರ ಪ್ರೇರಣಾದಾಯಕ ಪಯಣ. ಜೀವನದ ಕಠಿಣ ಸವಾಲುಗಳ ಮಧ್ಯೆಯೂ ಹಿಂತಿರುಗದೆ, ಕನಸುಗಳನ್ನು ದೊಡ್ಡದಾಗಿ ಕಂಡು, ಅದನ್ನು ಸಾಕಾರಗೊಳಿಸಲು ಕೈಗೊಂಡ ಹೆಜ್ಜೆಗಳು ಇಂದು ಸಾವಿರಾರು ಜನರಿಗೆ ಮಾದರಿಯಾಗಿದೆ. BTA ಡೈಮಂಡ್ ಮೆಂಬರ್ ಆಗಿ ಅವರು ಗಳಿಸಿದ ಜ್ಞಾನ, ಮಾರ್ಗದರ್ಶನ ಮತ್ತು ದೃಢ ಸಂಕಲ್ಪವೇ ಅವರ ಯಶಸ್ಸಿನ ಬಲವಾದ ನೆಲೆ.
ನಾನು ದಾವಣಗೆರೆ ಜಿಲ್ಲೆಯ ಬಸವ ಪಟ್ಟಣ ಎಂಬ ಪುಟ್ಟ ಗ್ರಾಮದವನು, ನನ್ನ ಹೈಸ್ಕೂಲ್ ಹಂತದಲ್ಲಿ ಅಲ್ಪ ಅಂಕಗಳೊಂದಿಗೆ sslc ಪಾಸ್ ಆಗಿದೆ. ತಂದೆಯವರು ಶಿಕ್ಷಕರಾಗಿದ್ದು, ನನ್ನ ವಿದ್ಯಾಭ್ಯಾಸ ಮತ್ತು ಜೀವನದ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದರು. ಗ್ರಾಮದಿಂದ ಬೆಂಗಳೂರಿಗೆ ಬಂದು ಕನ್ನಡ ಮಾಧ್ಯಮದಲ್ಲಿ ಓದಿ, ಪಿಯುಸಿ ಹಾಗೂ ಬಿ.ಎಸ್.ಸಿ ಬಯೋಟೆಕ್ನಾಲಜಿ Bio Technology ಮುಗಿಸಿದೆ. 2006ರಲ್ಲಿ ಕೇವಲ 3,000 ರೂ. ವೇತನದೊಂದಿಗೆ ಸಣ್ಣ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದೆ.
2012ರಲ್ಲಿ ನನ್ನ ಮಗ ವಿಷ್ಣುಗೆ ಶ್ವಾಸಕೋಶ ಸಮಸ್ಯೆ ಉಂಟಾಗಿ ಅಪೋಲೊ ಆಸ್ಪತ್ರೆಯಲ್ಲಿ 4 ಲಕ್ಷ ರೂ. ವೆಚ್ಚವಾಯಿತು. ಆರ್ಥಿಕ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ನನಗೆ ಇದು ದೊಡ್ಡ ಆಘಾತ. ಆದರೆ ಈ ಘಟನೆಯೇ ನನ್ನನ್ನು ಬಿಸಿನೆಸ್ ಲೋಕಕ್ಕೆ ತಳ್ಳಿತು.
2015ರಲ್ಲಿ, ನನ್ನ ಮಗನ ಹೆಸರಿನಲ್ಲಿ “ವಿಷ್ಣು ಹೆಲ್ತ್‌ಕೆರ್ ಸಿಸ್ಟಮ್” ಕಂಪನಿಯನ್ನು (Health Care & Bio Tech) ನನ್ನ ಪತ್ನಿ ಅವರೊಂದಿಗೆ ಆರಂಭಿಸಿದೆ. ಆರಂಭದಲ್ಲಿ ನಾವು ಇಬ್ಬರೂ ಮಾತ್ರ ಕೆಲಸ ಮಾಡಿ, ಮಾರ್ಕೆಟಿಂಗ್, ಸೆಲ್ಸ್, ಅಕೌಂಟ್ಸ್ ಮತ್ತು ಡೆಲಿವರಿ ಎಲ್ಲವನ್ನೂ ನಿರ್ವಹಿಸುತ್ತಿದ್ದೆವು. ಸಿಸ್ಟಮ್ ಅಥವಾ ತಂಡ ಇರಲಿಲ್ಲ.
ಕೆಲವು ದಿನಗಳ ಹಿಂದೆ, ಫೇಸ್‌ಬುಕ್‌ನಲ್ಲಿ “ನಿಮ್ಮ ಬಿಸಿನೆಸ್ ಸಿಸ್ಟಮ್ಯಾಟಿಕ್ ಆಗಿ ನಡೆಯುತ್ತಿಲ್ಲವೇ? ನಿಮ್ಮ ಬಿಸಿನೆಸ್ ಕಷ್ಟದಲ್ಲಿದೆಯೇ?” ಎಂಬ ಜಾಹೀರಾತು ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಸತ್ಯ ಸರ್ ಅವರ ಧ್ವನಿ ಕೇಳಿ, ಅವರು ನನ್ನ ಮನಸ್ಸಿನ ಮಾತನ್ನೇ ಹೇಳುತ್ತಿರುವಂತೆ ಅನಿಸಿತು. ತಕ್ಷಣವೇ ನಾನು 4 ದಿನಗಳ ವೆಬಿನಾರ್‌ಗೆ ಸೇರಿದೆ. ಆ ವೆಬಿನಾರ್ ನಂತರ, ನಾನು ಡೈಮಂಡ್ ಮೆಂಬರ್‌ಶಿಪ್‌ಗೆ ಸೇರಿದೆ.
ಡೈಮಂಡ್ ಮೆಂಬರ್‌ಶಿಪ್‌ನಲ್ಲಿ ಸತ್ಯ ಸರ್ ಮತ್ತು ಅನು ಮ್ಯಾಡಂ ಅವರು ಬಿಸಿನೆಸ್ ಹೇಗೆ ನಡೆಸಬೇಕು, ಅದನ್ನು ಸಾಮ್ರಾಜ್ಯದ ಮಟ್ಟಕ್ಕೆ ಹೇಗೆ ಬೆಳಸಬೇಕು ಎಂಬ ಗುಟ್ಟನ್ನು ಹಂಚಿಕೊಂಡರು. “ಡ್ರೀಮ್ ಬಿಗ್” ಎಂಬ ಸಂದೇಶ ನನ್ನ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು.
BTAಗೆ ಸೇರಿದ ನಂತರ, ಅನು ಮ್ಯಾಡಂ ಮಾರ್ಗದರ್ಶನದಲ್ಲಿ ಡಿಜಿಟಲ್ ಪಾಠಗಳನ್ನು ಕಲಿತು, (Health Care & Bio Tech) ಯೂಟ್ಯೂಬ್ ಚಾನೆಲ್ ಆರಂಭಿಸಿದೆ. ಗ್ರಾಹಕರಿಗೆ ಸರ್ವೀಸ್ ಸಂಬಂಧಿತ ಎಲ್ಲಾ ಮಾಹಿತಿ ವಿಡಿಯೋಗಳ ಮೂಲಕ ನೀಡಿದ ಕಾರಣ, ಸರ್ವೀಸ್ ಕಾಲ್‌ಗಳು ಕಡಿಮೆಯಾಗಿವೆ. ಅಕೌಂಟ್ಸ್, ಸೆಲ್ಸ್ ಟೀಮ್ ಮತ್ತು ಆಟೊಮೇಶನ್ ಪ್ರಕ್ರಿಯೆಗಳನ್ನು ಅಳವಡಿಸಿ, ಬಿಸಿನೆಸ್ ಸಂಪೂರ್ಣವಾಗಿ ಸಿಸ್ಟಮ್ಯಾಟಿಕ್ ಆಗಿ ರೂಪಾಂತರಗೊಂಡಿದೆ.
BTA ಗೆ ಸೇರಿದ ಕೇವಲ ಒಂದೂವರೆ ತಿಂಗಳಲ್ಲೇ, ಆಫ್ರಿಕಾದ ಎರಿಟ್ರಿಯಾ ದೇಶದಿಂದ ಲ್ಯಾಬ್ ಸೆಟ್‌ಅಪ್ ಮಾಡಲು 2 ಕೋಟಿ ರೂ. ಮೌಲ್ಯದ ಆರ್ಡರ್ ಪಡೆಯುವ ಅವಕಾಶ ದೊರೆಯಿತು. ಈ ಅವಕಾಶದಿಂದ 8 ಡಯಾಗ್ನೋಸ್ಟಿಕ್ ಸೆಂಟರ್‌ಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವು ಇಂದು ನನಗೆ ನಿರಂತರ ಆದಾಯ ನೀಡುತ್ತಿವೆ.
“ಡ್ರೀಮ್ ಬಿಗ್” ತತ್ವವನ್ನು ಅನುಸರಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವ ಗುರಿ ಇಟ್ಟುಕೊಂಡೆ. ಅದೇ ವರ್ಷ ಆಫ್ರಿಕಾದಲ್ಲಿ ಲ್ಯಾಬ್ ಸ್ಥಾಪನೆ ಮಾಡುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಬ್ರ್ಯಾಂಡ್ “ನಾಡಿಗ್ ಬಯೋಟೆಕ್” ಹುಟ್ಟಿತು. ಇಂದು ನನ್ನ ಕಂಪನಿ ಅನಲೈಸರ್‌ಗಳ ಮೂಲಕ ಎಲ್ಲಾ ಇನ್‌ಸ್ಟ್ರುಮೆಂಟ್‌ಗಳು ಮತ್ತು ಸೆಗ್ಮೆಂಟ್‌ಗಳಲ್ಲಿ ಸೇವೆ ನೀಡುತ್ತಿದೆ.
BTA ಮತ್ತು ಸತ್ಯ ಸರ್ ಮಾರ್ಗದರ್ಶನದಿಂದ, ನಾನು ಕನ್ನಡ ಮಾಧ್ಯಮ ಶಾಲೆಯಿಂದ ಕಲಿತ ವಿದ್ಯಾರ್ಥಿಯಿಂದ ಜಾಗತಿಕ ಮಟ್ಟದ ಉದ್ಯಮಿಯಾಗುವವರೆಗೆ ಬಂದಿದ್ದೇನೆ. ಇಂದು 25 ಜನರ ಶಕ್ತಿಶಾಲಿ ತಂಡದೊಂದಿಗೆ, ಮುಂದಿನ 10 ವರ್ಷಗಳಲ್ಲಿ ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಗುರಿ ಹೊಂದಿದ್ದೇನೆ.
ನಾನು ಗರ್ವದಿಂದ ಹೇಳುವ ಮಾತು – ನಾನು ಈಗ ಶಕ್ತಿಶಾಲಿ ಬಾಸ್!
ನೀವು ಕೂಡ ಶ್ರೀವತ್ಸ ಅವರಂತೆ ನಿಮ್ಮ ಬಿಸಿನೆಸ್‌ನಲ್ಲಿ ಸಕ್ಸಸ್ ಕಾಣಲು ಇಚ್ಛಿಸುತ್ತೀರಾ? ಆದ್ರೆ ಎಲ್ಲೋ ಒಂದು ಹಂತದಲ್ಲಿ ಸ್ಟಕ್ ಆಗಿದ್ದೀರಾ ಅನ್ನಿಸುತ್ತಿದೆಯಾ? ಒಂದು ಹೆಜ್ಜೆ ಮುಂದೆ ಇಡಿ – ಈಗಲೇ BTA Silver Membership ಗೆ ಸೇರಿ!
🎉 ಸ್ವಾತಂತ್ರ್ಯ ದಿನಾಚರಣೆ ಮತ್ತು BTA ಫೌಂಡರ್ ಹುಟ್ಟುಹಬ್ಬದ ವಿಶೇಷವಾಗಿ, ನಿಮಗಾಗಿಯೇ ನಾವು ತಂದಿದ್ದೇವೆ – ಡಬಲ್ ಧಮಾಕಾ ಆಫರ್! 💥
